ಅಸ್ಸಾಂನ ಕಾಜಿರಂಗ ಸಮೀಪದ ರೊಂಗಾಜನ್ನಲ್ಲಿ ಮಿನಿ ಬಸ್ ಮತ್ತು ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 23 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಅತಿ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವೆಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೊಹೊರಾ ಮಾದರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿಸಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಂಟೇನರ್ ಟ್ರಕ್ಗೆ ಡಿಕ್ಕಿ ಹೊಡೆದಿರಬಹುದೆಂದು ಅಂದಾಜಿಸಲಾಗಿದೆ.
Kaziranga Accident: ಅಸ್ಸಾಂನ ಕಾಜಿರಂಗದಲ್ಲಿ ಮಿನಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ: 23 ಮಂದಿ ಸಾವು
ಅಸ್ಸಾಂನ ಕಾಜಿರಂಗ ಸಮೀಪದ ರೊಂಗಾಜನ್ನಲ್ಲಿ ಮಿನಿ ಬಸ್ ಮತ್ತು ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 23 ಮಂದಿ ದಾರುಣವಾಗಿ...
By Dhallo News · November 13, 2026 at 5:15 PM IST
Have feedback on this article?Report error or suggestion
